ಆಯುರ್ವೇದ ಅರಿವು ಮಾಲಿಕೆ – ೧೦

5 12 2009
ಕಫದೋಷ
 
ಜಲದಿಂದ ಉಂಟಾದದ್ದು ಕಫವು. ಹಾಗಾಗಿ ಬಂಧನ, ಬಲ, ತರ್ಪಣ, ನುಣುಪು ಇತ್ಯಾದಿಗಳಿಗೆ ಇದೇ ಕಾರಣ. 
ಕಫದ ಸಾಮಾನ್ಯ ಗುಣಗಳೆಂದರೆ ಸ್ನಿಗ್ಧತೆ, ಅಂಟುವಿಕೆ, ಗುರುತ್ವ / ಭಾರ, ಮಂದತೆ, ಶೀತಗುಣ, ಜಾರುವಿಕೆ ಇತ್ಯಾದಿ.
ಇದು ಮುಖ್ಯವಾಗಿ ಎದೆಯ ಭಾಗದಲ್ಲಿ ಮೂಲವನ್ನು ಹೊಂದಿದ್ದು ಸಂದುಗಳು, ಜಠರ, ನಾಲಿಗೆ, ಶಿರಸ್ಸು ಇತ್ಯಾದಿ ಪ್ರಮುಖ ಸ್ಥಾನಗಳಲ್ಲಿ ಚಲಿಸುತ್ತದೆ.
ಕಫವನ್ನು ತರ್ಪಕ, ಅವಲಂಬಕ, ಬೋಧಕ, ಕ್ಲೇದಕ ಮತ್ತು ಶ್ಲೇಷಕ ಕಫವೆಂದು ಕರ್ಮ-ಸ್ಥಾನಗಳಿಗನುಗುಣವಾಗಿ ವಿಂಗಡಿಸುತ್ತಾರೆ. ತರ್ಪಕವು ಮೆದುಳನ್ನು ರಕ್ಷಿಸಿ ಪೋಷಿಸಿದರೆ, ಅವಲಂಬಕವು ಹೃದಯವನ್ನು ರಕ್ಷಿಸುತ್ತದೆ. ಬೋಧಕವು ರುಚಿಯನ್ನು ಗ್ರಹಿಸಿದರೆ, ಕ್ಲೇದಕವು ಆಹಾರ ಪಚನಕ್ಕೆ ಸಹಾಯ ಮಾಡುತ್ತದೆ ಮತ್ತು ಶ್ಲೇಷಕವು ನಮ್ಮ ಸಂದುಗಳಲ್ಲಿ ಜಾರುವ ದ್ರವದಂತೆ ಇದ್ದು ಚಲನೆಗೆ ಸಹಾಯ ಮಾಡುತ್ತದೆ.
ಕಫವು ಅತಿಯಾದಾಗ ದೇಹಭಾರವಾಗುವುದು, ಜಡತ್ವ, ಹಸಿವು ಮಂದವಾಗುವುದು, ನಿದ್ರೆ ಅತಿಯಾಗುವುದು, ಆಯಾಸ, ದೇಹದಲ್ಲಿ ನೀರು ಮತ್ತು ಕೊಬ್ಬಿನ ಶೇಖರಣೆ, ಮೈ ಬಿಳಿಚಿಕೊಳ್ಳುವುದು, ವಾಂತಿ ಇತ್ಯಾದಿಗಳು ಕಂಡುಬರಬಹುದು. ಹಾಗೆಯೇ ಕಡಿಮೆಯಾದರೆ ವಾತವು ಜಾಸ್ತಿಯಾದ ಲಕ್ಷಣಗಳು ಕಂಡುಬರುತ್ತವೆ.
ಯಾರಿಗಾದರೂ “ಕೊಬ್ಬು” ಜಾಸ್ತಿಯಿದ್ದರೆ ಬಯ್ಯಬೇಡಿ ಅವರನ್ನು, ಅದು ಅವರ ತಪ್ಪಲ್ಲ…ಕಫದ್ದು ! ( ಕಫ ಜಾಸ್ತಿಯಾಗುವಂತೆ ಮಾಡಿಕೊಂಡದ್ದಕ್ಕೆ ಬೈಯಿರಿ ತೊಂದರೆಯಿಲ್ಲ 🙂 )
Advertisements

Actions

Information

5 responses

14 09 2010
Raghu SP

ನಿಮ್ಮ ಎಲ್ಲಾ ಸರಣಿಗಳನ್ನು ಇಂದು ಓದಿದೆ, ನೀವು ತಿಳಿಸಿರುವಂತೆ ಬೊಜ್ಜಿಗೆ ಕಫಾ ಕಾರಣವಾದರೆ, ಕಫಾ ತೆಗೆದರೆ ಬೊಜ್ಜು ಕರಗುತ್ತದೆಯೇ

15 09 2010
drprasannabhat

ಒಂದು ರೀತಿಯಲ್ಲಿ ಹೌದು. ಆದರೆ ಕಫವೆಂದರೆ ಬರಿಯ ಕೆಮ್ಮಿನೊಂದಿಗೆ ಬರುವ ಗಂಟಲ ಕಫವಲ್ಲ. ದೇಹದಲ್ಲಿ ಸೇರುವ ಕೊಬ್ಬು, ನೀರು ಇತ್ಯಾದಿ ಕೂಡ ಕಫದ ವ್ಯಾಪ್ತಿಯಲ್ಲೇ ಬರುತ್ತವೆ.

7 01 2011
ಡಾ. ಜ್ಞಾನದೇವ್

ಆಯುರ್ವೇದದ ಬಗ್ಗೆ ಪ್ರಾಮಾಣಿಕವಾದ ಅರಿವನ್ನು ಮೂಡಿಸುವ ಈ ನಿಮ್ಮ ಪ್ರಯತ್ನ ತು೦ಬಾ ಶ್ಲಾಘನಿಯ ಪ್ರಸನ್ನರವರೆ. ನಿಮ್ಮ ಪ್ರಯತ್ನಗಳಲ್ಲಾ ಯಶಸ್ವಿಯಾಗಲಿ. ಸಮಾಜಕ್ಕೆ ಒಳಿತಾಗಲಿ.

7 01 2011
drprasannabhat

ಧನ್ಯವಾದಗಳು ಸರ್. ನಿಮ್ಮಂತಹ ಹಿರಿಯರ ಸಲಹೆ, ಆಶೀರ್ವಾದ, ಒತ್ತಾಸೆಯಿರುವಾಗ ಎಲ್ಲವೂ ಸಾಧ್ಯ ಸರ್.

15 06 2012
Bunny

Ha Ha ha.. sogasagi vivarisiddiri….

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
%d bloggers like this: