ಆರೋಗ್ಯ ಸಲಹೆ

ವಾಯುವಿನ ತೊಂದರೆಗೆ

ವಾಯುವಿನ ತೊಂದರೆಯಿಂದಾಗಿ ಹೊಟ್ಟೆ ಉಬ್ಬರ, ಗ್ಯಾಸ್ ಅಥವಾ ನೋವು ಕಂಡುಬಂದರೆ ಅರ್ಧ ಟೀ ಚಮಚೆ ಜೀರಿಗೆಯನ್ನು ಜಗಿದು ಬಿಸಿನೀರು ಕುಡಿಯಿರಿ. ಜಗಿಯಲು ಬೇಡವೆಂದಾದರೆ ಅರ್ಧ ಲೋಟ ನೀರಿನಲ್ಲಿ ಒಂದು ಕುದಿ ಬರಿಸಿ, ಸ್ವಲ್ಪ ತಣಿಸಿ ಕುಡಿಯಿರಿ. ಇದು ಮಲಬದ್ಧತೆ ಮತ್ತು ವಾಯುವಿನಿಂದಾದ ಕೆಳಬೆನ್ನುನೋವಿಗೂ ಆಗುತ್ತದೆ, ಮುಟ್ಟಿನ ಶೂಲೆಗೂ ಆಗುತ್ತದೆ.

ಬೆವರುಸಾಲೆ – ಪಿತ್ತಗಂಧೆಗೆ

ಬೆವರುಸಾಲೆ, ಪಿತ್ತಗಂಧೆ ಅಥವಾ ಇನ್ನಾವುದೇ ತುರಿಕೆ ಮತ್ತು ಉರಿಯಿಂದ ಕೂಡಿದ ಚರ್ಮದ ಅಲರ್ಜಿ ತೊಂದರೆಗೆ ಲೋಳೆಸರ (Aloe vera) ದ ರಸವನ್ನು ಹಚ್ಚಿ, ಹಾಗೆಯೇ ಬಿಡಿ. ಒಣಗಿದ ಮೇಲೆ ಪುನಃ ಹಚ್ಚಬಹುದು. ಸರಿಯಾಗಿ ಶಮನವಾಗುವವರೆಗೆ ಇದನ್ನು ಮುಂದುವರೆಸಬಹುದು. ಬಹುಕಾಲದ ತೊಂದರೆ, ಸೋಂಕಿನಿಂದ ಕೂಡಿದ ತೊಂದರೆ ಇದ್ದರೆ ವೈದ್ಯರ ಸಲಹೆ ಕೇಳುವುದು ಉತ್ತಮ.

ಒಣಚರ್ಮದ ತೊಂದರೆಗೆ

ಒಣಚರ್ಮದ ತೊಂದರೆಗೆ ರಾಸಾಯನಿಕ ತೇವಕಾರಿಗಳನ್ನು ಹಚ್ಚುವ ಬದಲಿಗೆ ವಾರದಲ್ಲಿ ೨-೩ ಬಾರಿ ಕೊಬ್ಬರಿ ಅಥವಾ ಎಳ್ಳಿನ ಎಣ್ಣೆಯಿಂದ ಮಾಲೀಶು (ಅಭ್ಯಂಗ) ಮಾಡಿ, ಅರ್ಧ/ಒಂದು ಗಂಟೆಯ ನಂತರ ಬಿಸಿನೀರ ಸ್ನಾನ ಮಾಡಿ.

ನಿದ್ರಾಹೀನತೆಗೆ

ಸುಖನಿದ್ರೆಯ ಸಮಸ್ಯೆಯಿದ್ದರೆ ಇದನ್ನು ಪ್ರಯತ್ನಿಸಿ. ಬೆಚ್ಚಗಿನ ಎಳ್ಳೆಣ್ಣೆಯಿಂದ ಎರಡೂ ಪಾದಗಳಿಗೆ ೮-೧೦ ನಿಮಿಷ ಮಾಲೀಶು ಮಾಡಿ, ಬೆಚ್ಚನೆಯ ನೀರಿನಲ್ಲಿ ೧೦ ನಿಮಿಷ ಪಾದಗಳನ್ನು ಮುಳುಗಿಸಿಡಿ. ನಂತರ ಒರೆಸಿ, ಮಲಗಲು ತೆರಳಿ. ಕೆಲದಿನಗಳ ಕಾಲ ಮಾಡಿದರೆ ನಿದ್ರೆಯು ಉತ್ತಮಗೊಳ್ಳುವುದು.

Advertisements

One response

12 09 2010
Raghu ms

I reduse my body weight

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s
%d bloggers like this: